Sunday, December 4, 2011

ಮಾಡುವೆ ಅನ್ನೋದು ಯುದ್ದದಂತೆ. ಅತ್ತೆ-ಸೊಸೆ ಸೋಲ್ತಾರೆ, ಗಂಡ ಎಂಬೋ ಪ್ರಾಣಿ ಸಾಯುತ್ತೆ.

Friday, January 28, 2011

ಗೆಳೆಯ ಶರತ್ ನ ಒಂದು ಕವನ

ಮೊದಲನೇ ಚಿಂತನೆ -------------------- ಹುಲು-ಮಾನವ: ಸುಖದ ಹೊನಲ ದೊರೆಯು ನಾನು ಸಕಲ ಸಿರಿಯ ಗಣಿಯು ನಾನು ಭುವಿಯ ಮೇಲೆ ರಾಜ ನಾನು ನಾ ಯಾರಿಗಿಲ್ಲಿ ಕಡಿಮೆಯೇನು ? ದೈವ : ಕೇಡು ಗುಣದ ದೊರೆಯು ನೀನು ಸಕಲ ನೋವ ಗಣಿಯು ನೀನು ಭಯದ ವಿಷದ ಮೂಲ ನೀನು ವಿಧಿಯ ಮುಂದೆ ತೃಣವು ನೀನು ಕಾಲ ಮುಗಿಯೇ ಮಣ್ಣು ನೀನು !! ಎರಡನೆ ಚಿಂತನೆ --------------------- ತಣಿಸ ಹೊರಟಿಯೇ ಜೋಕೆ ಹುಚ್ಚು ಹೆಬ್ಬಯಕೆಗಳ ಗಜದ ಮದದಂತೆ ಸರ್ಪದ ವಿಷದಂತೆ ಹಾಳುಗೆಡುವವು ಬಾಳ ಕಟ್ಟಿ ಹಾಕಿ ಆಸೆ ಮೂಟೆ ಗಳ ಅಲ್ಪ ಬಯಸಿ, ತುಂಬ ಶ್ರಮಿಸಿ ಕಾಯಕವ ಮಾಡು ನಿರ್ಲಿಪ್ತತೆಯಲಿ.. ಸುಖ ಬರುವುದು ನಿನ್ನ ದಾರಿಯಲಿ..!